+91-8482-245241 regkvafsu@gmail.com

ಕುಲಪತಿಗಳು

ಡಾ.ಕೆ.ಸಿ.ವೀರಣ್ಣ

ಹುದ್ದೆ ಮತ್ತು ಪೂರ್ಣ ವಿಳಾಸ :
ಕುಲಪತಿಗಳು,
ಕಪಪಮೀವಿವಿ, ನಂದಿನಗರ, ಬೀದರ್ 585 401
ಇ-ಮೇಲ್: vckvafsub@gmail.com, vckvafsu@yahoo.com
ಶೈಕ್ಷಣಿಕ ಅರ್ಹತೆಗಳು: ಎಂ.ವಿ.ಎಸ್ಸಿ, ಪಿ.ಹೆಚ್.ಡಿ.

ಡಾ|| ಕೆ.ಸಿ. ವೀರಣ್ಣ ರವರು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಕುಲಪತಿಗಳಾಗಿ ದಿನಾಂಕ 11ನೇ ಜುಲೈ, 2022 ರಂದು ನಾಲ್ಕು ವರ್ಷಗಳ ಅವಧಿಗೆ ಅಧಿಕಾರವಹಿಸಿಕೊಂಡರು.

ಈ ಹುದ್ದೆ ಅಲಂಕರಿಸುವ ಪೂರ್ವದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಪ್ರಭಾರಿ ಕುಲಪತಿಗಳಾಗಿ, ಕುಲಸಚಿವರಾಗಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್ ರಾಗಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗದ ವಿಶೇಷ ಕರ್ತವ್ಯಾಧಿಕಾರಿಗಳಾಗಿ ಹಾಗೂ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ (NSS) ಸಂಯೋಜಕರಾಗಿ ಸೇವೆಸಲ್ಲಿಸಿರುತ್ತಾರೆ. ಭಾರತೀಯ ಪಶುವೈದ್ಯಕೀಯ ಪರಿಷತ್ತು (VCI) ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ (ICAR) ರವರ ನಿಯಮಾವಳಿಗಳ ಪ್ರಕಾರ ವಿಶ್ವವಿದ್ಯಾಲಯದ ಸಂಸ್ಥೆಗಳಲ್ಲಿ ಪ್ರಯೋಗಾಲಯಗಳು, ಮೂಲಸೌಕರ್ಯಗಳು ಮುಂತಾದುವುಗಳಿಗೆ ಯೋಜನೆ ರೂಪಿಸುವಲ್ಲಿ ಹಾಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದ್ದಾರೆ.

ಇದಲ್ಲದೇ, ಇವರು ವಿವಿಧ ವಿಶ್ವವಿದ್ಯಾಲಯಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ಸಂಸ್ಥೆಗಳು/ ಸಮಿತಿಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿರುತ್ತಾರೆ. ಇವರು ವಿಶ್ವವಿದ್ಯಾಲಯದ ಪಶುಸಂಗೋಪನೆ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ ಭೋದಕ, ಸಹಾಯಕ ಪ್ರಾಧ್ಯಾಪಕ, ಸಹ-ಪ್ರಾಧ್ಯಾಪಕ, ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

ಇವರು 30 ವರ್ಷಗಳಿಗೂ ಹೆಚ್ಚುಕಾಲ ಪದವಿ ಹಾಗೂ ಸ್ನಾತಕೋತ್ತರ ಭೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತಾರೆ. ಇವರು 15 ಸ್ನಾತಕೋತ್ತರ (MVSc) ವಿದ್ಯಾರ್ಥಿಗಳು, 03 (Ph.D.) ವಿದ್ಯಾರ್ಥಿಗಳು ಹಾಗೂ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡಿರುತ್ತಾರೆ. ಇವರು ಕರ್ನಾಟಕ ರಾಜ್ಯ ಸರ್ಕಾರ ಪ್ರಾಯೋಜಿತ KWDP II ಸುಜಲಾ-III ಯೋಜನೆ, ICAR-NAIP, ನವದೆಹಲಿ ಹಾಗೂ DBT, ನವದೆಹಲಿ ಪ್ರಾಯೋಜಿಸಿದ ಮೂರು ಬಾಹ್ಯ ಯೋಜನೆಗಳಿಗೆ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇದಲ್ಲದೇ, ವಿಶ್ವವಿದ್ಯಾಲಯದ ಅನುದಾನಿತ ನಾಲ್ಕು ಯೋಜನೆಗಳಲ್ಲಿ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು KWDP II ಸುಜಲಾ-III ಯೋಜನೆಯ, ನೋಡಲ್ ಅಧಿಕಾರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ವಿಸ್ತರಣಾ ಕ್ಷೇತ್ರದಲ್ಲಿ ಇವರು ಸಮ್ಮೇಳನದ ಸಂಯೋಜಕರಾಗಿ ಎರಡು ರಾಷ್ಟ್ರೀಯ ಮಟ್ಟದ ಸಮ್ಮೇಳಗಳನ್ನು ಆಯೋಜಿಸಿದ್ದಾರೆ. ರೈತರ ಸಲುವಾಗಿ 150 ತರಬೇತಿ ಕಾರ್ಯಕ್ರಮಗಳು, ಇಲಾಖೆ ಅಧಿಕಾರಿಗಳ ಸಲುವಾಗಿ 30 ತರಬೇತಿ ಕಾರ್ಯಕ್ರಮಗಳು, 100 ಕ್ಕೂ ಹೆಚ್ಚು ಕ್ಷೇತ್ರ ಪ್ರಾತ್ಯಕ್ಷೀಕೆ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಇದಲ್ಲದೇ, ಇತರ ಸಂಸ್ಥೆಗಳು ಆಯೋಜಿಸಿದ್ದ ವಿವಿಧ ವಿಸ್ತರಣಾ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಸುಮಾರು 70 ಲೇಖನಗಳನ್ನು ಪ್ರಸ್ತುತಪಡಿಸಿದ್ದಾರೆ. ಅಷ್ಟೇಅಲ್ಲದೇ, 120 ಜನಪ್ರೀಯ ಲೇಖನಗಳು/ ಕರಪತ್ರಗಳು/ ಬುಲೆಟಿನಗಳು ಮತ್ತು ಐದು ಪುಸ್ತಕಗಳನ್ನು ಹೊರತುಪಡಿಸಿ ಉತ್ತಮ ಗುಣಮಟ್ಟದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ (ಜರ್ನಲ್) 67 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿಗಳು/ಪುರಸ್ಕಾರಗಳು:

1

2000 ನೇ ಇಸ್ವಿಯಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ವತಿಯಿಂದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ (NSS) ಪ್ರಶಸ್ತಿ.

2

2000 ನೇ ಇಸ್ವಿಯಲ್ಲಿ ಭಾರತೀಯ ಪಶುವೈದ್ಯಕೀಯ ಸಂಘದ ವತಿಯಿಂದ ಲೀಲಾವತಿ ಕೃಷ್ಣಾರಾವ ಪ್ರಶಸ್ತಿ.

3

2010-2011 ಮತ್ತು 2016 ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ಮೆರಿಟ್ ಪ್ರಮಾಣ ಪತ್ರ.

4

2010, 2013, 2016, 2017 ಮತ್ತು 2018ನೇ ಇಸ್ವಿಯಲ್ಲಿ ಉತ್ತಮ ಸಂಶೋಧನೆ, ಪ್ರಬಂಧ/ ಲೇಖನಗಳನ್ನು ಪ್ರಸ್ತುತ ಪಡಿಸಿದ್ದಕ್ಕಾಗಿ ವಿವಿಧ ವೃತ್ತಿಪರ ಸಂಘಗಳು ಮತ್ತು ಸಂಸ್ಥೆಗಳಿಂದ ಪ್ರಶಸ್ತಿ.

5

2014 ನೇ ಇಸ್ವಿಯಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ಬೆಂಗಳೂರು ರವರಿಂದ ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ.