+91-8482-245241 regkvafsu@gmail.com

ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ (ದೇವಣಿ)ಕಟ್ಟಿತುಗಾಂವ, ಬೀದರ

ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು (ದೇವಣಿ) 1970ರಲ್ಲಿ ಬೀದರ ಜಿಲ್ಲೆಯ ಕಟ್ಟಿತುಗಾಂವ ಗ್ರಾಮದ ಬಳಿ ಸುಮಾರು 57 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಪ್ರಮುಖ ಉದ್ದೇಶವು ದ್ವಿ-ಉದ್ದೇಶದ ದೇವಣಿ ಜಾನುವಾರು ತಳಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯಾಗಿದೆ. ಈ ಕೇಂದ್ರವು ಬೀದರ-ಹುಮನಾಬಾದ ರಸ್ತೆಗೆ (ರಾಜ್ಯ ಹೆದ್ದಾರಿ-105) ಹೊಂದಿಕೊಂಡಿದೆ.

ಉದ್ದೇಶಗಳು:

• ದೇವಣಿ ತಳಿಯನ್ನು ಸಂರಕ್ಷಿಸುವುದು, ನಿರ್ವಹಿಸುವುದು ಮತ್ತು ಜಾನುವಾರುಗಳನ್ನು ಹೆಚ್ಚಿನ ಅನುವಂಶಿಕ ಅರ್ಹತೆಯೊಂದಿಗೆ ಅಭಿವೃದ್ಧಿ ಪಡಿಸುವುದು.
• ದೇವಣಿ ತಳಿಯ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗುವ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವುದು.
• ಆಧುನಿಕ ಹಾಗೂ ಸುಧಾರಿತ ಪಶುಪಾಲನಾ ಪದ್ಧತಿಗಳನ್ನು ರೈತರಿಗೆ ಪ್ರಚುರಗೊಳಿಸುವುದು.