ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್

ಈ ಸಂಸ್ಥೆಯು ದಿನಾಂಕ 03.09.2012 ರಲ್ಲಿ ಶಿಗ್ಗಾಂವಿಯಲ್ಲಿ ಹಳೇ ಕೋರ್ಟ್ ಆವರಣದ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. ದಿನಾಂಕ 22.03.2018 ರಂದು ಕುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸ್ಥಳಾಂತರಗೊಂಡಿದೆ.
ಹತ್ತನೇ ತರಗತಿ ಪೂರ್ಣಗೊಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ‘ಪಶು ಸಂಗೋಪನಾ ಡಿಪ್ಲೊಮಾ’ಕ್ಕಾಗಿ ಬೋಧನೆ ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ. ಬೋಧನಾ ಮಾಧ್ಯಮವು ಕನ್ನಡವಾಗಿದ್ದು ಇದೊಂದು ಸ್ವಯಂ ಉದ್ಯೋಗಕ್ಕಾಗಿ ಸರ್ಕಾರದಿಂದ ತೆರೆಯಲ್ಪಟ್ಟ ಸಂಸ್ಥೆಯಾಗಿದೆ. ಸುಮಾರು 25 ಎಕರೆ ಪ್ರದೇಶದಲ್ಲಿ ಹೈನುರಾಸು, ಆಡು ಮತ್ತು ಕುರಿ ಘಟಕಗಳಿವೆ. ಮುಧೋಳ ತಳಿಯ ಶ್ವಾನಗಳನ್ನು ಸಹ ಸಾಕಲಾಗುತ್ತಿದೆ. ಒಂದು ಎಕರೆ ವಿಸ್ತೀರ್ಣದಲ್ಲಿ ವಿವಿಧ ಮೇವಿನ ತಳಿಗಳ ಪ್ರಾತ್ಯಕ್ಷಿಕೆಯ ಘಟಕವಿದೆ. ಪಶುಸಂಗೋಪನೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಾದ ವಿವಿಧ ಪ್ರಾಣಿಗಳ ಸಾಕಾಣಿಕೆ ಹಾಗೂ ಮೇವಿನ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳು ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿರುವ ರೈತ ತರಬೇತಿ ಕೇಂದ್ರದಿಂದ 300ಕ್ಕೂ ಹೆಚ್ಚು ರೈತರು ತರಬೇತಿ ಪಡೆದಿರುತ್ತಾರೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿವೆ.
ಸಿಬ್ಬಂದಿಗಳ ವಿವರ:
ಪ್ರಾಚಾರ್ಯರು

ಡಾ. ಧರ್ಮರಾಜ್ ಜಿ. ವೈ.
ಎಂ.ವಿ.ಎಸ್‍ಸ್ಸಿ.
ಮಿಂಚಂಚೆ: dharma714@gmail.com, dharma714@kvafsu.edu.in
ಮೊಬೈಲ್ ಸಂಖ್ಯೆ: 9916619253
ವೃತ್ತಿ ವಿವರ:
ಸರ್ಕಾರೇತರ ಸಂಸ್ಥೆಗಳಲ್ಲಿ 2 ವರ್ಷ ಮತ್ತು ಪಶುವೈದ್ಯಾಧಿಕಾರಿಗಳಾಗಿ 10 ತಿಂಗಳು ಸೇವೆ ಸಲ್ಲಿಸಿ 2019ರಿಂದ ಸಹಾಯಕ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ವಿವರ:
ಮಾನ್ಯತೆ ಪಡೆದ ಪದಕಗಳು ಮತ್ತು ಪ್ರಶಸ್ತಿಗಳ ವಿವರ |
ಕುಕ್ಕುಟ ವಿಜ್ಞಾನ ವಿಭಾಗದಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ. |
ವೆಂಕಟೇಶ್ವರ ಹ್ಯಾಚರೀಸ್ ಲಿಮಿಟೆಡ್‍ರವರಿಂದ ಬಿ. ವಿ. ರಾವ್ ಫೌಂಡೇಶನ್ ಚಿನ್ನದ ಪದಕ |
ಪ್ರಕಟಣೆಗಳು : ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು: 20.
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್
ಹಾವೇರಿ ಜಿಲ್ಲೆ
ಕರ್ನಾಟಕ-581193
ಮಿಂಚಂಚೆ: ahpshiggaon@gmail.com
ಮೊಬೈಲ್ ಸಂಖ್ಯೆ: 9916619253
