+91-8482-245241 regkvafsu@gmail.com

ಹೈನು ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿ

ದೇಶದ ಹೈನು ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಮಾನವಶಕ್ತಿಯ ಅಗತ್ಯವನ್ನು ಪೂರೈಸುವ ಉದ್ದೇಶದಿಂದ ಈ ಮಹಾವಿದ್ಯಾಲಯವನ್ನು 2008ರಲ್ಲಿ ಪ್ರಾರಂಭಿಸಲಾಯಿತು. ಉತ್ತಮ ಪ್ರಗತಿಯನ್ನು ಸಾಧಿಸುವತ್ತ ಸಂಸ್ಥೆಯು ದಾಪುಗಾಲುಗಳನ್ನಿಟ್ಟಿದೆ. ಕಲಬುರಗಿ ನಗರದಿಂದ 30 ಕಿಮೀ ದೂರದ ಮಹಾಗಾವ್ ಕ್ರಾಸ್ ಬಳಿ ಮಹಾವಿದ್ಯಾಲಯವಿದೆ. ವಿದ್ಯಾರ್ಥಿಗಳಿಗೆ ಹೈನು ವಿಜ್ಞಾನದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಪ್ರಾಯೋಗಿಕ ತರಬೇತಿಯನ್ನು ಮಹಾವಿದ್ಯಾಲಯವು ನೀಡುತ್ತಿದೆ.

ಮಹಾವಿದ್ಯಾಲಯದಲ್ಲಿ ಡೈರಿ ಟೆಕ್ನಾಲಜಿ, ಡೈರಿ ಕೆಮಿಸ್ಟ್ರಿ, ಡೈರಿ ಮೈಕ್ರೋಬಯಾಲಜಿ, ಡೈರಿ ಇಂಜಿನಿಯರಿಂಗ್ ಮತ್ತು ಡೈರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಎಂಬ ಐದು ವಿಭಾಗಗಳಿವೆ. ಹೈನು ಮತ್ತು ಆಹಾರ ವಿಜ್ಞಾನಗಳಿಗೆ ಸಂಬಂಧಿಸಿದಂತೆ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಸೇವೆಗಳಲ್ಲಿ ಕಠಿಣ ಪರಿಶ್ರಮ ಮತ್ತು ನಾಯಕತ್ತ್ವವನ್ನು ಒದಗಿಸುವುದು. ಸಾಮಾಜಿಕವಾಗಿ ಮತ್ತು ತಾಂತ್ರಿಕವಾಗಿ ಪ್ರಸ್ತುತವಾಗಲು ವಿಜ್ಞಾನ ಮತ್ತು ಸಮಕಾಲೀನ ಬೆಳವಣಿಗೆಗಳ ಬಳಸುವುದು. ಈ ನಿಟ್ಟಿನಲ್ಲಿ ಮಹಾವಿದ್ಯಾಲಯದ ಅಧ್ಯಾಪಕರು ನೂತನ ಮಾದರಿಗಳನ್ನು ಬಳಸಿ ಅತ್ಯುತ್ತಮ ಮಾನವ ಸಂಪನ್ಮೂಲ, ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಡೈರಿ ಮತ್ತು ಆಹಾರ ಕ್ಷೇತ್ರದಲ್ಲಿ ಗ್ರಾಮೀಣ ಆಧಾರಿತ ರೈತಸ್ನೇಹಿ ವಿಧಾನಗಳ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ.