+91-8482-245241 regkvafsu@gmail.com

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ

ನವೆಂಬರ್ 14, 1984ರಂದು ರಾಜ್ಯದ ಎರಡನೇ ಪಶುವೈದ್ಯಕೀಯ ಮಹಾವಿದ್ಯಾಲಯವನ್ನಾಗಿ ಬೀದರನಲ್ಲಿ ಈ ಮಹಾವಿದ್ಯಾಲಯವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ಥಾಪಿಸಲಾಯಿತು. ನಂತರ 1987ರಲ್ಲಿ ಈ ಮಹಾವಿದ್ಯಾಲಯವು ಕೃಷಿ ವಿಶ್ವವಿದ್ಯಾಲಯ, ಧಾರವಾಡಕ್ಕೆ ಸೇರಿತು.

ಮಹಾವಿದ್ಯಾಲಯವು ಬೀದರಿನ ನಂದಿನಗರ ಆವರಣದಲ್ಲಿ ಸುಮಾರು 156 ಎಕರೆ ಪ್ರದೇಶದಲ್ಲಿದೆ. ಪಶುವೈದ್ಯಕೀಯ ಸ್ನಾತಕ ಪದವಿಯ ಜೊತೆಗೆ 09 ವಿಭಾಗಗಳಲ್ಲಿ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 1500 ಸ್ನಾತಕ ಪದವಿ, 185 ಸ್ನಾತಕೋತ್ತರ ಪದವಿ ಹಾಗೂ 14 ಪಿಎಚ್‍ಡಿ ಪದವಿ ನೀಡಲಾಗಿದೆ. ಬೋಧನೆಯ ಜೊತೆಗೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮುಖಾಂತರ ರೈತರಿಗೆ ಆರ್ಥಿಕ ಬಲವನ್ನು ನೀಡುತ್ತಿದೆ. ಉತ್ತಮ ಗುಣಮಟ್ಟದ ಕೊಠಡಿಗಳು, ಪ್ರಯೋಗಾಲಯಗಳು, ವೈಜ್ಞಾನಿಕ ಚಿಕಿತ್ಸಾ ವಿಧಾನಗಳು, ಹಾಗೂ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿವೆ.