+91-8482-245241 regkvafsu@gmail.com

ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಕಡಲ), ಅಂಕೋಲಾ, ಉತ್ತರ ಕನ್ನಡ

ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಅಂಗಸಂಸ್ಥೆಯಾಗಿದ್ದ ಕೃಷಿ ಸಂಶೋಧನಾ ಕೇಂದ್ರ, ಅಂಕೋಲಾವನ್ನು 2005ರಲ್ಲಿ ಹೊಸದಾಗಿ ಸ್ಥಾಪಿತವಾದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿಗೆ ಸೇರಿಸಲಾಯಿತು. ಕೃಷಿ ಸಂಶೋಧನಾ ಕೇಂದ್ರದ ಹೆಸರನ್ನು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಕಡಲ) ಎಂದು ಮರುನಾಮಕರಣ ಮಾಡಲಾಯಿತು. ಸದರಿ ಕೇಂದ್ರವು ಅಂಕೋಲಾದಿಂದ ಪಶ್ಚಿಮಕ್ಕೆ 3 ಕಿ.ಮೀ. ದೂರದಲ್ಲಿರುವ ಬೇಳಾದ ಅರಬ್ಬಿ ಸಮುದ್ರ ತೀರಕ್ಕೆ ಹೊಂದಿಕೊಂಡಿರುತ್ತದೆ. ಕೇಂದ್ರದ ಒಟ್ಟು ವಿಸ್ತೀರ್ಣ 5.75 ಹೆಕ್ಟೇರ್‍ಗಳಿದ್ದು ಅದರಲ್ಲಿ 2.95 ಹೆಕ್ಟೇರ್ ವಿಸ್ತೀರ್ಣದ ಸೀಗಡಿ ಮತ್ತು ಮೀನು ಕೊಳಗಳನ್ನು ಹೊಂದಿರುತ್ತದೆ.

ಧ್ಯೇಯೋದ್ದೇಶಗಳು:
1. ಚೌಳುಪ್ಪು ಮತ್ತು ಕಡಲ ನೀರಿನ ಮೀನು ಮತ್ತು ಸೀಗಡಿಗಳ ಸಾಕಾಣಿಕೆಗೆ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸುವುದು.
2. ಚೌಳುಪ್ಪು ಮತ್ತು ಕಡಲ ನೀರಿನ ಮೀನು ಮತ್ತು ಸೀಗಡಿಗಳ ಸಂತಾನ ಅಭಿವೃದ್ದಿ, ಪಾಲನೆ ಮತ್ತು ಆರೋಗ್ಯ ನಿರ್ವಹಣೆ ಬಗ್ಗೆ ಸಂಶೋಧನೆ ಕೈಗೊಳ್ಳುವುದು.
3. ಮೀನು ಮತ್ತು ಸೀಗಡಿ ಕೃಷಿಕರಿಗೆ ಮಣ್ಣು, ನೀರಿನ ಪರೀಕ್ಷೆ ಮತ್ತು ರೋಗಗಳ ಪತ್ತೆ ಹಚ್ಚುವಿಕೆ ಬಗ್ಗೆ ಮಾಹಿತಿ ಒದಗಿಸುವುದು.