+91-8482-245241 regkvafsu@gmail.com

ವಿಸ್ತರಣಾ ಚಟುವಟಿಕೆಗಳು

ಸಂಕ್ಷಿಪ್ತ ಪರಿಚಯ

  • ರೈತರಿಗೆ ವಿಸ್ತರಣಾ ಶಿಕ್ಷಣ ಮತ್ತು ಸೇವೆಯನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ವಿಸ್ತರಣಾ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ.
  • ವಿಸ್ತರಣಾ ನಿರ್ದೇಶನಾಲಯವು ವಿಶ್ವವಿದ್ಯಾನಿಲಯ ಮತ್ತು ರೈತ ಸಮುದಾಯದ ನಡುವಿನ ಕೊಂಡಿಯಾಗಿ ಸುಧಾರಿತ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ವರ್ಗಾಯಿಸುವ ಕಾರ್ಯನಿರ್ವಹಿಸುತ್ತಿದೆ. ರೈತರ ಸಮಸ್ಯೆಗಳನ್ನು ಗುರುತಿಸಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಅನುವು ಮಾಡಿಕೊಡಲಾಗುತ್ತಿದೆ.
  • ರೈತರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿರ್ದೇಶನಾಲಯದ ಮುಖ್ಯ ಧ್ಯೇಯವಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯ ಕ್ಷೇತ್ರಗಳಲ್ಲಿ ವಿಸ್ತರಣಾ ಸಾಹಿತ್ಯ ಮತ್ತು ಸುಧಾರಿತ ಪದ್ದತಿಗಳ ಸಾಹಿತ್ಯವನ್ನು ನಿರ್ದೇಶನಾಲಯವು ಪ್ರಕಟಿಸುತ್ತಿದೆ.
  • ಪ್ರತಿ ಸಂಸ್ಥೆಯ ಅಡಿಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಜಾನುವಾರು ಚಟುವಟಿಕೆಗಳ ಅಭಿವೃದ್ಧಿಗಾಗಿ ಮಾದರಿ ಗ್ರಾಮವನ್ನಾಗಿ ರಚಿಸುವ ಗುರಿಯನ್ನು ನಿರ್ದೇಶನಾಲಯವು ಹೊಂದಿದೆ. ಗ್ರಾಮೀಣ ಮಹಿಳೆಯರು, ರೈತರು ಮತ್ತು ನಿರುದ್ಯೋಗಿ ಯುವಕರಿಗೆ ಜಾನುವಾರು ಮತ್ತು ಮೀನುಗಾರಿಕೆ ಘಟಕಗಳನ್ನು ಸ್ಥಾಪಿಸಲು ಶಿಕ್ಷಣ ನೀಡಿ ಅವರನ್ನು ಬಲಪಡಿಸುವುದು ಮತ್ತು ಅಲ್ಲಿನ ವಿಸ್ತರಣಾ ಕಾರ್ಯದಲ್ಲಿ ತೊಡಗಿರುವ ವಿಸ್ತರಣಾ ಸಿಬ್ಬಂದಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಲಾಗುತ್ತಿದೆ.
  • ರೈತ ಸಮುದಾಯದ ಅನುಕೂಲಕ್ಕಾಗಿ ಸಮೂಹ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲು ವಿವಿಧ ಜಾನುವಾರು ಮತ್ತು ಮೀನುಗಾರಿಕೆ ನಿರ್ವಹಣೆ ಚಟುವಟಿಕೆಗಳ ಕುರಿತು ಸಾಕ್ಷ್ಯಚಿತ್ರಗಳನ್ನು ತಯಾರಿಸಲು ನಿರ್ದೇಶನಾಲಯವು ಯೋಜನೆಯನ್ನು ರೂಪಿಸಿದೆ.

ಉದ್ದೇಶಗಳು

  • “ಗ್ರಾಮ್ಯ ಮುಖಿ ಮತ್ತು ರೈತ ಸ್ನೇಹಿ”.
  • ರೈತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅದರ ಬಹುಮುಖ ವಿಸ್ತರಣಾ ಚಟುವಟಿಕೆಗಳ ಮೂಲಕ ಸುಧಾರಿಸುವುದು.
  • ವಿಶ್ವವಿದ್ಯಾಲಯದ ಅಧೀನದ ಮಹಾವಿದ್ಯಾಲಯ ಮತ್ತು ಸಂಶೋಧನೆ ಮತ್ತು ಮಾಹಿತಿ ಕೇಂದ್ರಗಳ ಮೂಲಕ ಸರಣಿ ತರಬೇತಿ ಕಾರ್ಯಕ್ರಮ, ಪ್ರಾತ್ಯಕ್ಷಿಕೆ, ರೈತ-ವಿಜ್ಞಾನಿಗಳ ಸಂವಾದದ ಕಾರ್ಯಕ್ರಮ, ಕ್ಷೇತ್ರ ದಿನ, ರೈತ ಕ್ಷೇತ್ರ ಶಾಲೆ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಮಾದರಿ ತರಬೇತಿ ಕೋರ್ಸ್, ಪಶು ಮೇಳ, ಮತ್ಸ್ಯ ಮೇಳ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಕನ್ನಡ ಮತ್ತು ಇಂಗ್ಲಿμï ಭಾಷೆಯಲ್ಲಿ ವಾರ್ಷಿಕ ವರದಿಗಳು, ಸುದ್ದಿ ಪತ್ರಗಳು, ಕರಪತ್ರಗಳು, ಯಶಸ್ಸಿನ ಕಥೆಗಳು, ಸುಧಾರಿತ ಅಳವಡಿಕೆ ಪದ್ದತಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ನಿಘಂಟುಗಳು, ಕೃಷಿ ಸಾಹಿತ್ಯ ಇತ್ಯಾದಿಗಳನ್ನು ಪ್ರಕಟಿಸುವುದು.

ಪೂರ್ಣಗೊಳಿಸಿರುವ ಪ್ರಮುಖ ಕಾರ್ಯಕ್ರಮಗಳು

  • ಸುಜಲಾ III - ವಿಶ್ವ ಬ್ಯಾಂಕ್ ಯೋಜನೆ
  • ICAR-KVK - ಭಾರತ ಸರ್ಕಾರ
  • NFDB - ಭಾರತ ಸರ್ಕಾರ
  • APC - ಕರ್ನಾಟಕ ಸರ್ಕಾರ

ವಿಸ್ತರಣೆ ಚಟುವಟಿಕೆಗಳು

  • ರೈತರಿಗೆ ಮತ್ತು ವಿಜ್ಞಾನಿಗಳಿಗೆ ತರಬೇತಿ ಕಾರ್ಯಕ್ರಮಗಳು
  • ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು
  • ಜಾನುವಾರುಗಳ ಆರೋಗ್ಯ ಶಿಬಿರಗಳು
  • ಜಾನುವಾರು ಪ್ರದರ್ಶನಗಳು
  • ಕ್ಷೇತ್ರ ದಿನಗಳು
  • ಪಶು ಮೇಳಗಳು
  • ಮತ್ಸ್ಯ ಮೇಳಗಳು